Anuraagava Kalisalu Song Lyrics in Kannada written by yogaraj bhat music composed by hari krishna anuragava kalisalu song sung by singer vaani hari krishna from latest movie kaatera
Song Credits:
Song: Anuraagava Kalisalu
Singer: Vaani Harikrishna
Lyrics: Yogaraj Bhat
Music: V Hari Krishna
Label: Anand Audio
Anuraagava Kalisalu Song Lyrics in Kannada
ಅನುರಾಗವ ಕಲಿಸಲು
ನೀ ಬಂದೆಯ ಹೇಳು
ಜನು ಜನುಮದ ನಂಟಿಗೆ
ನೀ ಕಂಡೆಯಾ ಹೇಳು
ನೀ ಹೇಳಬೇಕು ನಿನ್ನನ್ನು
ನಾನು ಹೇಗೆ ಕರೆಯಲಿ
ಎಲ್ಲರ ಕಾಯುವ
ದೇವರ ಕಣ್ಣು ನಿನ್ನ ಕಣ್ಣಲ್ಲಿ
ಹೇಗೆ ತೀರಿಸಲಿ ನಿನ್ನ ಋಣ
ಹೇಳು ನೀನೇ ನೀನೇ ಹೇಳು
ನಾನೇತಕೆ ನಿನ್ನನ್ನು
ಬಯಸುವೆನು ಹೇಳು
ಮನದಾಳಾವು ನಾಚಿದೆ
ಇದು ಪ್ರೀತಿ ಹೇಳು
ನಗುವುದು ತನು ಮನ
ನಿನ್ನನ್ನು ಕಂಡಾಕ್ಷಣ
ಸಿಗುವನು ದಿನ
ತುಸು ದೂರ ನಡೆಯುವ
ಚೆಲುವನೆ ನನ್ನೇ ನೋಡು
ಕನಸಿಗೆ ಬಂದು ಕಾಡು
ನಲುಮೆಯ ಹಾಡು
ಜತೆ ಸೇರಿ ನುಡಿಯುವ
ಎಲ್ಲೋ ನೋಡುತ್ತ
ಮೆಲ್ಲಗೆ ಅಪ್ಪಿಕೋ
ನನ್ನ ನಲ್ಮೆಯ
ನಲ್ಲನೇ ಒಪ್ಪಿಕೋ
ಊಹಿಸಲಾರೆ ನೀನಿಲ್ಲದೆ
ಹೇಗೆ ಬಾಳಲ್ಲಿ
ನನ್ನ ಮುಂದಿನ
ಜೀವನವೆಲ್ಲ ನಿನ್ನ ತೋಳಲ್ಲಿ
ಹೇಗೆ ತೀರಿಸಲಿ
ನಿನ್ನ ಋಣ
ಹೇಳು ನೀನೇ ನೀನೇ ಹೇಳು
ಅನುರಾಗವ ಕಲಿಸಲು
ನೀ ಬಂದೆಯ ಹೇಳು
ಜನುಜನುಮದ ನಂಟಿಗೆ
ನೀ ಕಂಡೆಯಾ ಹೇಳು