DOSTI Kannada Song Lyrics, kannada dosti song sung by singer yazin nizar music given by mm keeravaani, kannada dosti lyrics by azad varadaraj
Song Credits:
Song Name: DOSTI
Music : M. M. Keeravaani
Lyrics: Azad Varadaraj
Singer: Yazin Nizar
Label Credits : Lahari Music
DOSTI Kannada Song Lyrics – RRR (2021)
DOSTI Kannada Song Lyrics :
ಹುಲಿಗೂ ಗುರಿಕಾರನಿಗೂ
ತಲೆಗೂ ನೇಣ್ ಗಲ್ಲಿಗೂ
ಉರಿವ ದಾವಾಗ್ನಿಗೂ
ಸುರಿದ ಮಳೆಗಲ್ಲಿಗೂ
ರವಿಗೂ ಕಾರ್ಮೋಡಕೂ
ದೋಸ್ತಿ
ಊಹಿಸದ ಪಾತ್ರದ ಚಿತ್ರ
ಕರಬೆಸೆದ ಸ್ನೇಹ ವಿಚಿತ್ರ
ಪ್ರಾಣಕ್ಕಿದು ಪ್ರಾಣ
ನೀಡುವುದೋ ಬೇಡುವುದೋ
ಕಡಲಾಗ್ನಿಗು ಜಡಿ ಸೋನೆಗು ದೋಸ್ತಿ
ವಿಧಿ ಬರಹಕು ಎದುರೀಚಿಗು ದೋಸ್ತಿ
ಉರಿಜ್ವಾಲೆಗೆ ಹಿಮಗಿರಿ
ನೀಡಿದ ಅಪ್ಪುಗೆ ಈ ದೋಸ್ತಿ,
ಅನಿರೀಕ್ಷಿತ ಗಾಳಿ ಅಪಾರ
ಅಳಿಸುತ್ತಿದೆ ಇಬ್ಬರ ದೂರ
ಇರಬಹುದೆ ಹೀಗೆ ಸದಾ
ನಗು ಜೊತೆ ವೈರವು
ನಡೆದಾಡೊ ದಾರಿಯು ಒಂದ
ಹುಡುಕಾಡೊ ರೀತಿಯು ಬೇರೆ
ಮುರಿಯುವುದೆ ಸ್ನೇಹ ಬಂಧ
ಒಂದೆ ಕ್ಷಣ ನಡುವಲಿ
ತವಕದಿ ಭಗ ಭಗ ಉಕ್ಕಿ
ಬರುವ ಪ್ರವಾಹದೋಟವಿದು
ಮೊದಲೇ ತಿಳಿಸದ ಎದುರು
ಬರುವ ತಪ್ಪದ ತಿರುವು ಇದು
ಊಹಿಸದ ಪಾತ್ರದ ಚಿತ್ರ
ಕರಬೆಸೆದ ಸ್ನೇಹ ವಿಚಿತ್ರ
ಪ್ರಾಣಕ್ಕಿದು ಪ್ರಾಣ ನೀಡುವುದೋ,
ಬೇಡುವುದೋ
ಬಡಬಾಗ್ನಿಗು ಜಡಿಸೋನೆಗು ದೋಸ್ತಿ
ಬಲಶಾಲಿಗು ಬಲಶಾಲಿಗು ದೋಸ್ತಿ
ಉರಿಜ್ವಾಲೆಗೆ ಹಿಮಗಿರಿ
ನೀಡಿದ ಅಪ್ಪುಗೆ ಈ ದೋಸ್ತಿ
ಒಂದು ಹಸ್ತ ರಕ್ಷಣೆ ಬಲವು
ಮತ್ತೊಂದು ಮೃತ್ಯುವಿನೊಲವು
ಎಡಬಲವು ತೋರೊ
ಬಲಾಬಲ ಛಲ ಆಟವು
ಒಬ್ಬರದು ದಾರುಣ ಶಸ್ತ್ರ
ಒಬ್ಬರದು ಮಾರಣ ಶಾಸ್ತ್ರ
ತೆರೆ ಸರಿದು ಹೋದರೆ ಮೊಳಗದೆ
ಪ್ರಮಾದ ನಿನಾದವು
ತಪ್ಪದು ಎನ್ನುವ ಸಮಯದಲ್ಲಿ
ನಡೆಯುವ ಸಮರದಲಿ
ಸೋಲುವರಾರೊ
ಗೆಲುವರಾರೊ ಹೇಳುವರಾರಿಲ್ಲಿ
ಊಹಿಸದ ಪತ್ರದ ಚಿತ್ರ
ಕರಬೆಸೆದ ಸ್ನೇಹ ವಿಚಿತ್ರ
ಪ್ರಾಣಕ್ಕಿದು ಪ್ರಾಣ
ನೀಡುವುದೋ ಬೇಡುವುದೋ
ಬಡಬಾಗ್ನಿಗು ಬಡಿಸೋನೆಗು ದೋಸ್ತಿ
ಬಲಶಾಲಿಗು ಬಲಶಾಲಿಗು ದೋಸ್ತಿ
ಉರಿಜ್ವಾಲೆಗೆ ಹಿಮಗಿರಿ
ನೀಡಿದ ಅಪ್ಪುಗೆ ಈ ದೋಸ್ತಿ